Saturday, May 17, 2014

ನನ್ನ ಜೀವನ ಅಂದ್ರೆ........

ಸ್ವಲ್ಪ ಸಿಹಿ, ಸ್ವಲ್ಪ ಕಹಿ,
ಸ್ವಲ್ಪ ಕಷ್ಟ, ಸ್ವಲ್ಪ ನಷ್ಟ,
ಸ್ವಲ್ಪ ನೋವು, ಸ್ವಲ್ಪ ನಲಿವು,
ಸ್ವಲ್ಪ ಕನಸು, ಸ್ವಲ್ಪ ಮುನಿಸು,
ಸ್ವಲ್ಪ ಸೋಲು, ಸ್ವಲ್ಪ ಗೆಲುವು,
ಸ್ವಲ್ಪ ಬಿಸಿಲು, ಸ್ವಲ್ಪ ನೆರಳು,
ಅಪ್ಪ ಅಮ್ಮ, ಅಕ್ಕ ತಮ್ಮ,
ನನಗೆ ಅಂತ ಒಂದೆರಡು ಗುರಿ,
ಇದಿಷ್ಟು ಬಿಟ್ರೆ.... ಮಿಕ್ಕಿದ್ದೆಲ್ಲಾ.....
ಅವನ ನೆನಪುಗಳು ಮಾತ್ರ..............

ನನ್ನೊಲವಿನ ದೀಪ


ಬಂದೆ ಏಕೆ ನನ್ನ ಬಾಳಲಿ
ಭಾವದ ಜೊತೆ ಬೆರೆಯಲು
ನಿಂದೆ ಏಕೆ ನನ್ನ ಮನದಲಿ
ಪ್ರೀತಿಯ ಅಮೃತ ಉಣಿಸಲು

ನಿನ್ನಯ ಗೆಳೆತನ ಎಷ್ಟು ಚೆನ್ನ
ಮೀರಿಹುದು ಹೊನ್ನ ಹೊಳಪನು
ನಿನ್ನ ಒಲವಲಿ ಮನವು ನನ್ನ
ನಗೆಯ ಮಳೆಯಲಿ ಕುಣಿಸಿದೆ

ಮುತ್ತನಿತ್ತ ನಿನ್ನಯ ಮೊಗವಿದು
ಎಂತಹ ಸೌಮ್ಯದ ರೂಪವು
ನಿನ್ನ ಮತ್ತಲ್ಲೆ ತೇಲಿ ನಲಿದೆನು
ನೀನೆ ನನ್ನೊಲವಿನ ದೀಪವು

ನಿನ್ನ ಕಂಡು ಉರುಳಿದೆ ವರುಷ
ಯಾತನೆ ಮನದ ಪ್ರತಿ ನಿಮಿಷ
ನೀನು ಇಲ್ಲದೆ ಎಲ್ಲಿದೆ ಹರುಷ
ಏಕೆ ನನ್ನನು ಕೊಲ್ಲದು ಈ ವಿಷ
ಬಾರೋ ನನ್ನನು ಕಾಣಲು...!!

ಮುತ್ತ ಕೊಟ್ಟು ಮರತಿಹೆ ನೀನು
ಹಕ್ಕಿಯೇ ಇಲ್ಲದೆ ಬಂಜರು ಬಾನು
ನಿನ್ನನೆ ನೆನಸುತ ಎಣಿಸಿಹೆ ಉಸಿರನು
ನೋಡಲು ಬಾರೆಯ ನನ್ನನು ನೀನು
ಬಾರೆಯ ನನ್ನನು ಕಾಣಲು..!!

ನಿನ್ನನು ಕಾಣದ ಕಣ್ಣಿದೇಕೆ
ನಿನ್ನ ಹೆಸರನು ಕೊಗದ ನಾಲಿಗೆ ಏಕೆ
ನಿನ್ನ ಒಲವಲಿ ಅರಳದ ಬದುಕಿದು ಏಕೆ
ನಿನ್ನಯ ಹೆಸರಲೆ ಆರಲಿ ಉಸಿರು
ಬಾರಲೆ ನನ್ನನು ನೋಡಲು..!!
ಬಾರೋ ನನ್ನನು ನೋಡಲು..!!

ಸೌಂದರ್ಯ ದೇವತೆ


ನಿನ್ನ ಸೌಂದರ್ಯ ವರ್ಣಿಸಲೆಂದೆ
ಪ್ರಕೃತಿಗೆ ನಿನ್ನನ್ನು ಹೋಲಿಸಿದೆ, ಆದರೆ
ಪ್ರಕೃತಿಯೆ ನಿನ್ನೆದುರು ನಾಚಿ ನಿಂತಿತು

ನಿನ್ನ ಕಂಗಳ ಕಾಂತಿಯನ್ನು ವರ್ಣಿಸಲೆಂದೆ
ತಾರೆಗಳಿಗೆ ನಿನ್ನನ್ನು ಹೋಲಿಸಿದೆ, ಆದರೆ
ತಾರೆಗಳೆ ಕಣ್ಮುಚ್ಚಿ ಕುಳಿತವು

ನಿನ್ನ ನಾಟ್ಯವನ್ನು ವರ್ಣಿಸಲೆಂದೆ
ಮಯೊರಿಗೆ ಹೋಲಿಸಿದೆ, ಆದರೆ
ಮಯೊರಿ ನಾಟ್ಯವನ್ನು ನಿಲ್ಲಿಸಿತು

ನಿನ್ನ ಒಂದು ನೋಟದಿಂದ
ನನ್ನ ಕಂಗಳು ಬೆಳಕಾಯಿತು

ನಿನ್ನ ಒಂದು ನಗೆಯಿಂದ
ನನ್ನ ಜೀವನ ಹಸಿರಾಯಿತು
















Tuesday, April 1, 2014

ಅಳು




ಕೇಳದೆ ನಿನಗೆ ಮನದ ಅಳುವನ್ನ..
ಕೇಳೆಯ ಕಾರಣವ ನನ್ನ ಅಳುವನ್ನ..
ಶಶ್ವತವಾಗಿಸ ಬೇಡ ನನ್ನಲ್ಲೆ ಅಳುವನ್ನ..
ಬದಲಿಸು ನಗುವಾಗಿ ದಣಿದ ಅಳುವನ್ನ..

ಎಲ್ಲಿಗೆ..


ಬಳ್ಳಿಯ ಚಿಗುರಲ್ಲಿ ಅರಳಿದ ಕುಡಿ ಮಲ್ಲಿಗೆ..
ನೀರೆಯ ಮುಡಿ ಸೇರು ನಾಚುತ್ತ ಮೆಲ್ಲಗೆ..
ಮೊದಲ ಮಾತು, ಸ್ಪರ್ಶಕ್ಕೆ ಮನದೊಲ್ಲಿ ನಾಚಿಗೆ..
ಮನಸು ಹೊರಟಿದೆ ಇನಿಯನೆಡೆಗೆ ಕೇಳದಿರು ಎಲ್ಲಿಗೆ..

ಕಣ್ಣ ನೀರು


ಏಕೆ ?


ಹೃದಯಕ್ಕೆ ಏಲ್ಲ ಅರಿವಿದ್ದರು, ಮತ್ತೇಕೆ ಎಡವುದು...?
ಕೊಲ್ಲುವ ಕಣ್ಣಗಳಿಗೆ ಏಕೆ ನನ್ನ ಉದ್ದೇಶ ತಿಳಿಯದು..?
ಮರೆಯಲಾಗದ ನಿನ್ನ ನೆನಪುಗಳನ್ನ ಮರೆಯಲು ಏಕೆ ನೆನಪಾಗದು..?
ಮೆಲ್ಲನೆ ಹುಚ್ಚು ಮನಸ್ಸಿನ ಕಣ್ಣು ನಿನ್ನನ್ನೆ ಮತ್ತೆಕೆ ಅರೆಸಿದೆ..?