| ಬಂದೆ ಏಕೆ ನನ್ನ ಬಾಳಲಿ |
| ಭಾವದ ಜೊತೆ ಬೆರೆಯಲು |
| ನಿಂದೆ ಏಕೆ ನನ್ನ ಮನದಲಿ |
| ಪ್ರೀತಿಯ ಅಮೃತ ಉಣಿಸಲು |
|
| ನಿನ್ನಯ ಗೆಳೆತನ ಎಷ್ಟು ಚೆನ್ನ |
| ಮೀರಿಹುದು ಹೊನ್ನ ಹೊಳಪನು |
| ನಿನ್ನ ಒಲವಲಿ ಮನವು ನನ್ನ |
| ನಗೆಯ ಮಳೆಯಲಿ ಕುಣಿಸಿದೆ |
|
| ಮುತ್ತನಿತ್ತ ನಿನ್ನಯ ಮೊಗವಿದು |
| ಎಂತಹ ಸೌಮ್ಯದ ರೂಪವು |
| ನಿನ್ನ ಮತ್ತಲ್ಲೆ ತೇಲಿ ನಲಿದೆನು |
| ನೀನೆ ನನ್ನೊಲವಿನ ದೀಪವು |
|
| ನಿನ್ನ ಕಂಡು ಉರುಳಿದೆ ವರುಷ |
| ಯಾತನೆ ಮನದ ಪ್ರತಿ ನಿಮಿಷ |
| ನೀನು ಇಲ್ಲದೆ ಎಲ್ಲಿದೆ ಹರುಷ |
| ಏಕೆ ನನ್ನನು ಕೊಲ್ಲದು ಈ ವಿಷ |
| ಬಾರೋ ನನ್ನನು ಕಾಣಲು...!! |
|
| ಮುತ್ತ ಕೊಟ್ಟು ಮರತಿಹೆ ನೀನು |
| ಹಕ್ಕಿಯೇ ಇಲ್ಲದೆ ಬಂಜರು ಬಾನು |
| ನಿನ್ನನೆ ನೆನಸುತ ಎಣಿಸಿಹೆ ಉಸಿರನು |
| ನೋಡಲು ಬಾರೆಯ ನನ್ನನು ನೀನು |
| ಬಾರೆಯ ನನ್ನನು ಕಾಣಲು..!! |
|
| ನಿನ್ನನು ಕಾಣದ ಕಣ್ಣಿದೇಕೆ |
| ನಿನ್ನ ಹೆಸರನು ಕೊಗದ ನಾಲಿಗೆ ಏಕೆ |
| ನಿನ್ನ ಒಲವಲಿ ಅರಳದ ಬದುಕಿದು ಏಕೆ |
| ನಿನ್ನಯ ಹೆಸರಲೆ ಆರಲಿ ಉಸಿರು |
| ಬಾರಲೆ ನನ್ನನು ನೋಡಲು..!! |
| ಬಾರೋ ನನ್ನನು ನೋಡಲು..!! |
0 Comments:
Post a Comment
Subscribe to Post Comments [Atom]
<< Home